  ಮೂಲದೊಡನೆ ಪರಿಶೀಲಿಸಿ

ಕೇಂದ್ರಾಭಿಮುಖ ಮತ್ತು ಕೇಂದ್ರಾಪಗಾಮಿ ಬಲಗಳು

ವೃತ್ತಾಕಾರದ ಕಕ್ಷೆಯ ಮೇಲೆ ಒಂದು ಕಣ ಚಲಿಸುತ್ತಿರುವಾಗ ಅದರ ಮೇಲೆ ವೃತ್ತಕೇಂದ್ರದೆಡೆಗೆ ವರ್ತಿಸುತ್ತಿರುವ ಬಲ ಕೇಂದ್ರಾಭಿಮುಖ ಬಲ (ಸೆಂಟ್ರಿಪೀಟಲ್ ಪೋರ್ಸ್). ಒಂದು ಜಡ ಚೌಕಟ್ಟನ್ನು ಕುರಿತು ತಿ  ಕೋನವೇಗದಿಂದ ಆವರ್ತಿಸುತ್ತಿರುವ ಒಂದು ನಿರ್ದೇಶಕ ಚೌಕಟ್ಟಿನಲ್ಲಿರುವ ಒಬ್ಬ ವೀಕ್ಷಕ ಅನುಭವಿಸುವ ಆರೀಯವಾಗಿ ಹೊರಚಾಚಿರುವ ಬಲ ಕೇಂದ್ರಾಪಗಾಮಿ ಬಲ (ಸೆಂಟ್ರಿಫ್ಯೂಗಲ್ ಫೋರ್ಸ್).

	 m ದ್ರವ್ಯರಾಶಿಯಿರುವ ಒಂದು ಕಣ r ತ್ರಿಜ್ಯದ ವೃತ್ತಾಕಾರದ ಕಕ್ಷೆಯ ಮೇಲೆ ಚಲಿಸುತ್ತಿರುವಾಗ ಆ ಕಣದ ಮೇಲೆ mv2/r  ಪರಿಮಾಣದ ಕೇಂದ್ರಾಭಿಮುಖ ಬಲವರ್ತಿಸುತ್ತಿರುವುದು.  ಇಲ್ಲಿ v ಕಣದ ಕಕ್ಷಾವೇಗ, ಇದು ಕಣದ ಆಯಾ ಕಣದ ಸ್ಥಾನದಲ್ಲಿ ಕಕ್ಷೆಗೆ ಎಳೆದ ಸ್ಪರ್ಶರೇಖೆಯ ದಿಶೆಯಲ್ಲಿ ಇರುವುದು.  ಕಣದ ಕೋನ ವೇಗ ತಿ ಆಗಿದ್ದರೆ ಆಗ ಡಿತಿ=v ಆಗಿರುವುದರಿಂದ ಕೇಂದ್ರಾಭಿಮುಖಬಲ mತಿಡಿ' ಆಗುತ್ತದೆ.  ಕಣದ ಮೇಲೆ ಈ ಬಲ ಪ್ರಯುಕ್ತವಾಗದಿದ್ದರೆ ಅದು ವೃತ್ತಾಕಾರದ ಕಕ್ಷೆಯ ಮೇಲೆ ಚಲಿಸಲಾರದು.  ಈ ಬಲಕ್ಕೆ ಸಮವಾಗಿ ಇರುವ ಪ್ರತಿಬಲದ ಹೆಸರು ಕೇಂದ್ರಾಪಗಾಮಿ ಬಲ.

	ಕೇಂದ್ರಾಪಗಾಮಿ ಬಲ ಎನ್ನುವುದು ಒಂದು ಕಲ್ಪನೆ, ನಿಜವಲ್ಲದ ಬಲ ಎಂಬ ಅಭಿಪ್ರಾಯವಿದೆ. ಬಲ, ಪ್ರತಿಬಲಗಳು ಒಂದನ್ನು ಇನ್ನೊಂದು ನಿವಾರಿಸುವುದರಿಂದ ಒಟ್ಟು ಬಲ ಸೊನ್ನೆಯಾಗಿ ಕಣ ಸರಳರೇಖೆಯಲ್ಲಿ ಚಲಿಸಬೇಕಾಗುತ್ತದೆ ಎನ್ನುವುದೇ ಈ ಅಭಿಪ್ರಾಯಕ್ಕೆ ಕಾರಣ. ಆದ್ದರಿಂದ ಕೇಂದ್ರಾಪಗಾಮಿ ಬಲದ ನಿಜಸ್ವರೂಪವನ್ನು ತಿಳಿಯುವುದು ಆವಶ್ಯಕ. ವೇಗವಾಗಿ ತಿರುಗುವ ಗಿರಗಟ್ಟಲೆಯಲ್ಲಿ (ಮೆರ್ರಿ ಗೋರೌಂಡ್) ಕುಳಿತು ಒಂದು ಭಾರವಾದ ವಸ್ತುವನ್ನು ಕೈಯಲ್ಲಿ ಹಿಡಿದರೆ ಆ ವಸ್ತು ವೃತ್ತಕಕ್ಷೆಯಲ್ಲಿ ಆವರ್ತಿಸುವಾಗ ನಮ್ಮ ಕೈಯನ್ನು ಕೇಂದ್ರವಿಮುಖ ದಿಕ್ಕಿನಲ್ಲಿ ಜಗ್ಗಿಸುತ್ತದೆ. ವಸ್ತು ಕೇಂದ್ರದಿಂದ ದೂರವಾಗದೆ ಇರಬೇಕಾದರೆ ನಾವು ಆ ವಸ್ತುವನ್ನು ಕೇಂದ್ರದ ಕಡೆಗೆ ಸತತವಾಗಿ ಎಳೆದು ಇಟ್ಟುಕೊಳ್ಳಬೇಕಾಗುತ್ತದೆ. ಆದ್ದರಿಂದ ಆವರ್ತಿಸುತ್ತಿರುವ ಚೌಕಟ್ಟಿನಲ್ಲಿ ಕೇಂದ್ರಾಪಗಾಮಿ ಬಲದ ಅಸ್ತಿತ್ವ ಮತ್ತು ಅದರ ಪರಿಣಾಮ ನಿಜವಾದವೇ. ನೆಲದ ಮೇಲೆ ಇರುವ ವೀಕ್ಷಕನಾದರೋ (ಈತ ಚಲಿಸುತ್ತಿಲ್ಲ) ವಸ್ತು ಸರಳರೇಖೆಯಲ್ಲಿ ಚಲಿಸುವುದನ್ನು ತಪ್ಪಿಸಿ ವೃತ್ತಕಕ್ಷೆಯು ಚಲಿಸುವಂತೆ ಮಾಡಲು ಕೇಂದ್ರಾಭಿಮುಖ ಬಲ ಮಾತ್ರ ಪ್ರಯುಕ್ತವಾಗುತ್ತಿದೆ ಎಂದು ಎಣಿಸುತ್ತಾನೆ. ಕೇಂದ್ರಾಪಗಾಮಿ ಬಲ ಮಾತ್ರ ಈತನ ದೃಷ್ಟಿಯಿಂದ ನಿಜವಲ್ಲ. ಆವರ್ತಿಸುವ ಚೌಕಟ್ಟಿಗೆ ಸಂಬಂಧಿಸಿದಂತೆ ಕೇಂದ್ರಾಪಗಾಮಿ ಬಲ ಇರುವುದು ನಿಜ.     
      (ಎಚ್.ಎಸ್.ವಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ